ಕಳೆದುಹೋದ 30 ಗ್ರಾಂ ಚಿನ್ನವನ್ನು ಹುಡುಕಿ ಸಂತ್ರಸ್ತರಿಗೆ ಹಿಂದಿರುಗಿಸಿದ ಮಧುಗಿರಿ ಪೊಲೀಸರು
ಮಧುಗಿರಿ : ಪೊಲೀಸ್ ಠಾಣೆಯ ಆರಕ್ಷಕರ ಸಮಯ ಪ್ರಜ್ಞೆಯಿಂದ ಕಳೆದು ಹೋಗಿದ್ದ 30 ಗ್ರಾಂ ಚಿನ್ನದ ಇದ್ದ ಬ್ಯಾಗನ್ನು 12 ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿ ಸಂತ್ರಸ್ತರಿಗೆ ಹಿಂದಿರುಗಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಿಂದ ಮಡಕಶಿರಾ ಮಾರ್ಗವಾಗಿ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳ ಬ್ಯಾಗ್ ನಲ್ಲಿ 30 ಗ್ರಾಂ ಬೆಲೆಬಾಳುವ ಚಿನ್ನಾಭರಣಗಳು ಇದ್ದವು. ಅದೇ ಬಸ್ನಲ್ಲಿ ಮಧುಗಿರಿಗೆ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಪ್ರಯಾಣಿಸುತ್ತಿದ್ದ ಕುಟುಂಬದವರ ಬ್ಯಾಗ್ ಜೊತೆ ಸಂತ್ರಸ್ತರ ಬ್ಯಾಕ್ಗ್ ಕೂಡ ಸೇರ್ಪಡೆಯಾಗಿ ಕಾಣೆಯಾಗಿತ್ತು. ತಡರಾತ್ರಿ 12 ಗಂಟೆಗೆ ಮಧುಗಿರಿ ಪೊಲೀಸ್ ಠಾಣೆಗೆ ಬಂದು ಸಂತ್ರಸ್ತರು ಗಸ್ತಿನಲ್ಲಿದ್ದ ಠಾಣೆಯ ಎಸ್ ಐ ಚಂದ್ರಶೇಖರ್ ಅವರಿಗೆ ದೂರನ್ನು ಸಲ್ಲಿಸಿದ್ದರು. ಕಾರ್ಯಪ್ರವೃತ್ತರಾದ ಪಿಎಸ್ಐ ಮುಖ್ಯ ಪೇದೆ ಮಲ್ಲಿಕಾರ್ಜುನ ಅವರಿಗೆ ಕಾರ್ಯಾಚರಣೆ ಮಾಡುವಂತೆ ಸೂಚಿಸಿದ್ದು, ಕಾರ್ಯಾಚರಣೆ ನಡೆಸಿದ ಮಲ್ಲಿಕಾರ್ಜುನ್ ಸಂಶಯಾಸ್ಪದ ಕಾರ್ಯಾಚರಣೆ ಬೆನ್ನತ್ತಿ ನಾಮಕರಣದ ಕಾರ್ಯಕ್ರಮ ಒಂದಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸಂತ್ರಸ್ಥರ ಬ್ಯಾಗ್ ಪತ್ತೆಯಾಗಿರುತ್ತದೆ. ಎಸ್ ಐ ಚಂದ್ರಶೇಖರ್ ಹಾಗೂ ವೃತ್ತ ನಿರೀಕ್ಷಕರಾದ ಹನುಮಂತರಾಯಪ್ಪ ಅವರು ಕೇವಲ 12 ಗಂಟೆಗಳ ಯಶಸ್ವಿ ಕಾರ್ಯಾಚರಣೆಯ ನಂತರ ಸಂತ್ರಸ್ತರಿಗೆ 30 ಗ್ರಾಂ ಒಡವೆ ಇದ್ದ ಬ್ಯಾಗನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾದ ಮುಖ್ಯ ಪೇದೆ ಕಾರ್ಯಕ್ಷಮತೆಯನ್ನು ಮೆಚ್ಚಿ ಅಭಿನಂದನೆ ತಿಳಿಸಿದ್ದಾರೆ.